Saturday, June 29, 2013

ಸುಮ್ಮನೆ ಮಾತು ...

ಶರಣಾಗತಿಗೂ ಮುನ್ನ..

        ಬದುಕು ಒಮ್ಮೊಮ್ಮೆ ವಿಚಿತ್ರ ತಿರುವುಗಳಲ್ಲಿ ನಿಂತು ಚಿತ್ರ ವಿಚಿತ್ರ ಎನ್ನಿಸುವ ಪಾಠ ಕಲಿಸುತ್ತದೆ! ನಮಗೆ ಬೇಕಾಗೋ ಬೇಡವಾಗೋ ಕೆಲವು ಬಂಧನಗಳಲ್ಲಿ ನಾವು ಸುತ್ತಿಕೊಂಡುಬಿಡುತ್ತೇವೆ! ಎಷ್ಟೆಂದರೆ ಉಸಿರುಗಟ್ಟುವಷ್ಟು! ಅಲ್ಲಿರಲೂ ಆಗದೇ ಹೊರಬರಲೂ ಆಗದೇ ಒದ್ದಾಡುತ್ತೇವೆ. ಆಗೆಲ್ಲ ಮನಸಿನ ನಿಧರ್ಾರಕ್ಕಿಂತ ಬುದ್ದಿಯ ನಿಧರ್ಾರ ಯಾವಾಗಲೂ ಶ್ರೇಷ್ಟವಾಗಿರುತ್ತದೆ. ಆದರೆ ವಿಪಯರ್ಾಸವೆಂದರೆ ಹಾಗಾಗುವುದಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ಮನಸಿನ ಮೋಹಗಳೇ ಗೆದ್ದುಬಿಡುತ್ತವೆ. ಮತ್ತು ನಾವು  ಮೋಹಕ್ಕೆ ಅಥವಾ ಪ್ರೀತಿಗೆ  ಕಟ್ಟುಬಿದ್ದು ಬದುಕಿನ ವಾಸ್ತವಗಳಲ್ಲಿ ಅನಾವಶ್ಯಕ ಗೊಂದಲಗಳ ಸೃಷ್ಟಿಸಿಕೊಳ್ಳುತ್ತೇವೆ. ಇದು ಒಂದು ಸಣ್ಣ ಕತೆಯ ಆರಂಭ.

       ಮನಸೇ ಯಾವತ್ತಾದರೂ ಮಾತನಾಡುವಾಗ ಆಡಿದ ಮಾತು ಮುಂದೊಮ್ಮೆ ಪ್ರಶ್ನೆಯಾಗಿ ಅಥವಾ ನನ್ನನ್ನೇ ಕಾಡುವ ಭೂತವಾಗಿ ಎದುರು ನಿಲ್ಲಲಾರದೆಂಬ ವಿಶ್ವಾಸದಿಂದ ಬರೆದಿರುವ ಇಲ್ಲಿಯ ಮನಸಿನ ಮಾತುಗಳಿಗೆಲ್ಲ ಒಂದಿಷ್ಟು ವಿಶ್ವಾಸದ ತಳಹದಿಯಿದೆ. ಅದೇ ವಿಶ್ವಾಸದಿಂದ  ಈ ಮಾತುಗಳು ಮುಂದುವರೆಯುತ್ತವೆ. ದಿನದಿನಕೂ ಅಲ್ಲ ಕ್ಷಣ ಕ್ಷಣಕೂ ತೆರೆಯೇಳುವ ಈ  ಮನಸಿನ ಸರೋವರದಲ್ಲಿ ಸುಮ್ಮನೇ ಯೋಚನೆಗಳು ಮಡುಗಟ್ಟುತ್ತವೆ.

       ಬದುಕು ನಮ್ಮ ಅಧೀನವಂತೂ ಅಲ್ಲ. ಆದರೆ ಪರಾಧೀನವೂ ಅಲ್ಲ. ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿಯೇ ಮತ್ತಷ್ಟು ಹೊಂದಾಣಿಕೆಗಳಿಗೆ  ಬದುಕನ್ನು ಒಡ್ಡಿಕೊಳುತ್ತೇವೆ. ಕೆಲವು ಸಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕ ತಪ್ಪುಗಳ ಮಾಡುತ್ತಿರುತ್ತೇವೆ. ಪ್ರತೀ ಬಾರಿ ತಪ್ಪು ಮಾಡಿದಾಗಲೂ ಇಂತಹ ತಪ್ಪು ಮತ್ತೆ ಮಾಡಬಾರದೆಂಬ ಸಂಕಲ್ಪ ಮಾಡಿಯೂ ಮತ್ತೆ ಇನ್ಯಾವುದೋ ತಪ್ಪುಗಳ ಮಾಡುತ್ತಲೇ ಇರುತ್ತೇವೆ. ಮುಖ್ಯ ಹೇಳಬೇಕೆಂದರೆ ಇಲ್ಲಿ ಸರಿ ತಪ್ಪುಗಳ ನಿರ್ಣಯ ಬಹಳ ಕಷ್ಟ. ಪ್ರತಿಯೊಂದು ವಿಷಯಗಳಿಗೂ ಎರಡು ಮುಖಗಳು. ಬೇಕಾದರೆ ಸರಿ ಅಂದುಕೊಳ್ಳಬಹುದು. ಬೇಡವಾದರೆ ತಪ್ಪು ಅಂದ್ಕೊಬಹುದು. ಉದಾಹರಣೆಗೆ ಯಾರದ್ದೋ ಮಗು ಬಿದ್ದು ಅಳುತ್ತಿದ್ದರೆ ನಮ್ಮ ಮನಸು ಅಳುತ್ತದೆ. ನೋಡಿದಾಕ್ಷಣ ನಾವು ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಮಗು ಇನ್ನೂ ಜೋರಾಗಿ ಅಳುತ್ತದೆ. ಅದಕ್ಕೆ ನಮ್ಮ ಅಪರಿಚತತೆ ಮತ್ತಷ್ಟು ಭಯವಾಗಿ ಕಾಡುತ್ತದೆ. ನಮಗೆಲ್ಲೋ ಮನಸು ಇರುಸು ಮುರುಸು.  ಆ ಮಗುವಿನ ಅಮ್ಮ ನಾವಾಗಲಾರೆವು ಎಂಬುದು ಮಗುವಿನ ಸತ್ಯ. ಮಗು ಬಿದ್ದುದನ್ನು ನೋಡಿಯೂ ಹಾಗೆ ಹೊರಟು ಹೋಗಲಾಗದ್ದು ನಮ್ಮೊಳಗಿನ ಸತ್ಯ. ನೋವು ಮತ್ತು  ಬೀಳುವಿಕೆಯ ಆ ಎರಡೂ ಘಟನೆಗಳು ನಮ್ಮ ಇರುವಿಕೆಯ ಮೇಲೆ ಅಥವಾ ನಮ್ಮ ಭಾವಗಳ ಆ ಕ್ಷಣದ ಮೇಲೆ ಅವಲಂಬಿತವಾಗುತ್ತವೆ. ಸತ್ಯವೂ ಹಾಗೇ. ಅದು ಹಲವು ಮುಖಗಳ ಹೊಂದಿರುವ ಒಂದು ಪ್ಲೆಕ್ಸಿಬಲ್ ಆಗಿರುವ ಮತ್ತು ಆ ಕ್ಷಣದ ವಾಸ್ತವವಕ್ಕೆ  ಹತ್ತಿರವೆನಿಸುವ ವಿಷಯವಾಗಿದೆ.

         ನೈತಿಕತೆಯ ವಾದವನ್ನು ತೆಗೆದುಕೊಂಡರೂ ಜಾತೀಯತೆಯ ವಿಷಯ ತೆಗೆದುಕೊಂಡರೂ ಇಂತಹ ಅನೇಕ ಪ್ರಶ್ನೆಗಳು ಪದೇ ಪದೇ ಉದ್ಭವಿಸುತ್ತವೆ. ಪ್ರಶ್ನಾತೀತ ವೆನ್ನಿಸುವ  ಧರ್ಮ ಸತ್ಯಗಳೂ ಇಲ್ಲಿ ಪ್ರಶ್ನೆಗಳೇ. ತತ್ಕ್ಷಣದ ವಾಸ್ತವದೆದುರು ಉಳಿದೆಲ್ಲ ಸತ್ಯಗಳೆಂಬ ಸತ್ಯಗಳೂ ಮಾಯವಾಗಿರುತ್ತವೆ!

     ಈ ವಿಷಯವನ್ನೇ ಯಾಕೆ ಹೇಳುತ್ತಿದ್ದೇನೆಂದರೆ ಬದುಕನ್ನು ರೂಪಿಸಿಕೊಳ್ಳುವಾಗ ಒಂದಿಷ್ಟು ನಮ್ಮ ಕನಸುಗಳಿಗೆ ವಿರುದ್ಧವಾದ ಅಥವಾ ಸಮಾಧಾನವಿಲ್ಲದ ದಿನಗಳನ್ನು ಪ್ರತಿಯೊಬ್ಬರೂ ಎದುರಿಸಲೇಬೇಕಾಗುತ್ತದೆ. ವಿಧಿಯೋ ಕರ್ಮವೋ ದೈವವೋ ಯಾವುದೋ ಒಂದು ನಮಗಿಂತಲೂ ಮೀರಿದ್ದು ಮತ್ತು ನಮ್ಮೆಲ್ಲರ ಬದುಕನ್ನು ನಿಣರ್ಾಯಿಸುವ 
ಶಕ್ತಿಯಿದೆ ಎಂಬುದು ನಿವರ್ಿವಾದ. ಅದಕ್ಕೆ ಸಡ್ಡುಹೊಡೆದು ಬದುಕುವ ಛಲವೇ ನಮ್ಮ ಈ ಬದುಕಿನ ತುಂಬ ನಡೆಸುವ ಹೋರಾಟ. ಇಲ್ಲಿ ಶರಣಾಗತಿಯೆಂದರೆ ರಣರಂಗದಲ್ಲಿ ಗಾಂಡೀವ ಕೆಳಗಿಟ್ಟ ಅಜರ್ುನನ ಶರಣಾಗತಿಯಂತೆ. ನನಗೆ ಕೃಷ್ಣ ತತ್ವ ಪ್ರಿಯವೆನ್ನಿಸುವುದೂ ಈ ಕಾರಣಕ್ಕೆ. ಫಲಾಫಲಗಳ ದೈವಕ್ಕೆ ಬಿಟ್ಟು ಬಿಡೋಣ. ಹೋರಾಟದಿಂದ ಹಿಂದೆ ಸರಿಯುವ ಹೇಡಿಯಾಗಬಾರದು. ಯುದ್ಧಕ್ಕೆ ಮೊದಲೇ ಕುಸಿಯುವ ಬಲಹೀನರಾಗುವುದು ನಮಗಂತೂ ಶ್ರೇಷ್ಠ ಮಾರ್ಗವಲ್ಲ. ನಿನಗೆ ಬೇರೆ ಮಾರ್ಗವೇ ಇಲ್ಲ ಅಂದುಕೊಂಡಾಗ ಇರುವ ಒಂದೇ ಮಾರ್ಗದಲ್ಲಿ ಎಂತದ್ದೇ ಹೋರಾಟವೆದುರಾದರೂ ಗೆಲ್ಲುವ ಹಠ ಹುಟ್ಟಿಕೊಳ್ಳುತ್ತದೆ. ಮತ್ತು ಈ ಹಠಕ್ಕೆ  ಸೋಲೆಂಬುದಿಲ್ಲ. ಅದು ವಿಧಿಯನ್ನು ಗೆಲ್ಲುವ ಏಕೈಕ ಮಾರ್ಗ.

     ನಿನ್ನೆಯವರೆಗೂ ಡಿಗ್ರಿ ಮುಗಿಸಿಕೊಂಡ ಹುಡುಗಿಯೊಬ್ಬಳು ಮುಂದೇನು ಮಾಡುವುದೆಂಬ ನಿಶ್ಚಿತತೆಯೇ ಇಲ್ಲದೇ ತೊಳಲಾಟದಲ್ಲಿದ್ದಳು! ಅವಳದ್ದು ಸಮಸ್ಯೆ ಒಂದೆರಡಲ್ಲ. ಕೆಲಸ ಹುಡುಕಬೇಕೆಂದರೆ ಅವಳಿಗೆ  ತಕ್ಕಂತ ಯಾವ ಕೆಲಸವೂ ತತ್ಕ್ಷಣಕ್ಕೆ ಸಿಗಲಾರದು. ಅಪ್ಪ, ಅಮ್ಮನಿಗೆ ಇನ್ನೂ ಎರಡು ವರ್ಷ ಲಕ್ಷ ಗಟ್ಟಲೆ ಕಚರ್ು ಮಾಡಿ ಓದಿಸಲು ಮನಸ್ಸಿಲ್ಲ.  ಒಂದು ಹಂತದ ಓದು ಮುಗಿದಿದೆ. ಏನಾದರೂ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ವರ್ಷ ಕಳೆದರೆ ಮುಂದಿನ ವರ್ಷ ಮದುವೆ ಮಾಡಿ ಜವಾಬ್ಧಾರಿ ಕಳೆದುಕೊಳ್ಳುವ  ಯೋಚನೆ ಅವರದ್ದು. ಅದು ಒಂದು ವಿಧದಲ್ಲಿ ಸರಿಯೇ. ತಂದೆ ತಾಯಿಯಾಗಿ ಅವರ ಯೊಚನೆ. ಮುಂದೆ ಓದಿದರೂ ನೌಕರಿ ಮಾಡುವ ಯೋಗವಾಗಲೀ  ಅಥವಾ ಅಷ್ಟು ಓದಿದ ಮೇಲೆ ಕೆಲಸ ಮಾಡಲೇಬೇಕಾದ ಒತ್ತಡಗಳೂ ಅವಳ ಮೇಲೆ  ಬೀಳಬಹದು. ಆಗಲೂ ಅಪ್ಪ ಅಮ್ಮನ ಇಷ್ಟದ ಪ್ರಕಾರ ಮದುವೆಯಾಗಬೇಕಾದ ಜವಾಬ್ಧಾರಿಯಿದೆ ಅವಳಿಗೆ. ಸಿಇಟಿ ಬರೆದರೆ ಇದೇ ಊರಲ್ಲಿ ಕಾಲೇಜು ಸೀಟು ಸಿಗುವುದೆಂಬ ಗ್ಯಾರಂಟಿಯಿಲ್ಲ. ಬೇರೆ ಊರಿಗೆ ತಂದೆ ತಾಯಿ ಕಳಿಸೋದಿಲ್ಲ. ಒಂದೆರಡು ಸಮಸ್ಯೆಗಳೇ ಅಲ್ಲ. ಎಲ್ಲಕ್ಕಿಂತ ದೊಡ್ಡದು ಹಣದ ಸಮಸ್ಯೆಯಿದೆ.  ಇಷ್ಟೆಲ್ಲವೂ ರೆ ಗಳ ನಡುವೆ ಅವಳು ಒಂದು ನಿಧರ್ಾರಕ್ಕೆ ಬಂದಿದ್ದಳು.  ಅದು ನಿಧರ್ಿಷ್ಟವಾಗಿ.     ಮುಂದಿನ ಎರಡು ವರ್ಷಗಳು ಓದುತ್ತೇನೆಂಬುದು. ಹೇಗೆ ಏನು ಎಲ್ಲಿ ಈ ಪ್ರಶ್ನೆಗಳೆಲ್ಲ ಆ ನಿಧರ್ಾರದ ಜೊತೆಗೆ ಕರಗಲೇಬೇಕಿತ್ತು. ಸಿಇಟಿ ಪಾರ್ಮ್ ತುಂಬುವಾಗ ಇನ್ನಷ್ಟು "ರೆ' ಗಳು ಹುಟ್ಟಿಕೊಂಡವು! ಊರಿಂದ ಇನ್ನೂ ಒಬ್ಬಳೇ ಎಲ್ಲಗೂ ಕಾಲಿಡದಿದ್ದ ಅವಳು ದೂರದ ಜಿಲ್ಲೆಯ ಯೂನಿವಸರ್ಿಟಿಗೆ ಒಬ್ಬಳೇ ಹೋಗಿಬರಲು ನಿಶ್ಚಯಿಸಿಕೊಂಡಳು. ಮತ್ತೆಲ್ಲ ವಿರೋಧಗಳನ್ನೂ ಅವಳ ನಿಧರ್ಾರ ನಿಧಾನವಾಗಿ ಕರಗಿಸಿತು. ಹಣದ ವ್ಯವಸ್ಥೆ ಹೇಗೋ ಹೊಂದಿತು. ಅದೊಂದಾದರೆ ಉಳಿದಂತೆ ಎಲ್ಲವೂ ಅವಳ ಆತ್ಮಸ್ಥೈರ್ಯದ ಎದುರು ನಿಲ್ಲುವುದಾಗಲಿಲ್ಲ. ಸಿಇಟಿ ಯ ಒಳ್ಳೇ ಅಂಕಗಳು ಅವಳನ್ನು ಇದೇ ಊರಿಗೆ ಅಡ್ಮಿಷನ್ ಪಡೆಯಲು ಸಹಾಯಕವಾದವು! ಈಗವಳು ಪೋಸ್ಟ್ ಗ್ರಾಜುಯೇಟ್ ಓದುತ್ತಿದ್ದಾಳೆ! ಮತ್ತೆ ಅದನ್ನು ಮುಗಿಸಿ ಒಳೆಯ ಉದ್ಯೋಗ ಹೊಂದುವ ಭರವಸೆಯಲ್ಲಿದ್ದಾಳೆ. ಒಂದುವೇಳೆ ಮದುವೆಯೇ ಎಂದಾದರೂ ಓದು ತನ್ನ ಅವಶ್ಯಕತೆ. ಅದನ್ನು ಪೂರೈಸಿಕೊಂಡ ತೃಪ್ತಿ ಅವಳಿಗಿರುತ್ತದೆ. 

       ಇಷ್ಟೆಲ್ಲ ಕಥೆ ಹೇಳಿದ್ದುದರ ಅರ್ಥವಿಷ್ಟೇ. ಬದುಕನ್ನು ಭೂತಗನ್ನಡಿಯಲ್ಲಿ ತೋರಿಸುವುದು ವಿಧಿಯ ಸ್ವಭಾವ. ಒಮ್ಮೆ ಬೆಚ್ಚಿದರೆ ಬೆಚ್ಚಿ ಹಿಂದೆ ಸರಿದರೆ ನಿಶ್ಚಿತ ಗುರಿಯನ್ನು ತಲುಪಲಾಗದು. ಹಾಗಂತ ಬದುಕು ತುಂಬಾ ಈಸಿ ಅಂತ ಹೇಳುವುದು ನನ್ನ ಉದ್ದೇಶವಲ್ಲ. ನಾಳೆಗಳ ಕುರಿತು ನಾವೆಷ್ಟು ಲೆಕ್ಕಾಚಾರವಿಟ್ಟುಕೊಂಡೇ ಬದುಕಿದರೂ ಒಮ್ಮೊಮ್ಮೆ ತಲೆಕೆಳಗಾಗುವ ಲೆಕ್ಕಾಚಾರಗಳನ್ನೂ ಎದುರಿಸುವ ಮನಸ್ಥೈರ್ಯ ಎಂದಿಗೂ ಇಟ್ಟುಕೊಳ್ಳಲೇಬೇಕು. ಒಂದು ಚಿಕ್ಕ ಆಕ್ಸಿಡೆಂಟ್  ಸಾಕು ಬದುಕಿನ ಬಣ್ಣ ಬದಲಾಯಿಸಿಬಿಡಲು! ಯಾರೋ ಒಬ್ಬ ವ್ಯಕ್ತಿ ಸಾಕು ನಮ್ಮ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿಸಲು. ಹಾಗಂಥ ಲೆಕ್ಕಾಚಾರವಿಲ್ಲದ ನಿದರ್ಿಷ್ಟತೆಯಿಲ್ಲದ ಬದುಕು ಬದುಕಲಾಗದು. ಅದು ಸರಿಯೂ ಅಲ್ಲ. ಹಾಗಿದ್ದೂ ಬದುಕಿನ ಅನಿವಾರ್ಯ ಪರ್ವಗಳ ಅಷ್ಟೇ  ಪ್ರೀತಿಯಿಂದ ಬದುಕಲು ಒಪ್ಪಿಕೊಳ್ಳುವುದಿದೆಯಲ್ಲ ಇದು ವಿಧಿಗೆ ನಾವು ಹಾಕುವ ಸವಾಲು. ಏನೇ ಬರಲಿ ಬಂದಂತೆ ಸ್ವೀಕರಿಸಿಬಿಡುವ ಮತ್ತೆ ಬದುಕಿನ ಕನಸಿಗೆ ಜೀವ ತುಂಬಿಕೊಳ್ಳುವ ಹೋರಾಟದ ಜೊತೆಗೆ ಎಂತ ವಿಧಿಯೂ ಸೋಲಬೇಕು! ಸೋತು ಗೆಲ್ಲುವ ಜಾಣ್ಮೆಯಿದು.

ಸಾಕು ಇಂದಿಗೆ. ಮನಸಿನ ಮಾತಿಗೆ ಕೊನೆಯೇ ಇಲ್ಲ. ಮತ್ತೊಮ್ಮೆ ಸಿಗೋಣ ಈ  ತೀರದಲ್ಲಿ... 

  

Friday, June 7, 2013

ಮಾನಸ ಸರೋವರದ ಎಲ್ಲ ಬರಹಗಳನ್ನು ಸೇರಿಸಿ ಪುಸ್ತಕ ಮಾಡುವ ರಾಘು ಬಿ. ಎಂ ಅವರ ಕನಸು ನನಸಾಗಿದೆ. "ಮನನ" ಪುಸ್ತಕದ ರೂಪ ಪಡೆದು ಲೋಕಾರ್ಪಣೆಗೊಂಡ ಮಧುರ ಕ್ಷಣಗಳು

ಉದ್ಘಾಟನೆ
"ಸ್ವಸ್ತಿ ಪ್ರಕಾಶನ"  ಹಾಗೂ"ಚೈತ್ರರಶ್ಮಿ" ಬಳಗದ ಸ್ನೇಹಮಿಲನ ಕಾರ್ಯಕ್ರಮ
ಶ್ರೀ  ರಾಮಚಂದ್ರ ಹೆಗಡೆ ಸಿ.ಎಸ್. ಹಾಗೂ  ಡಾ.ಮಹೇಶ  ಅಡಕೋಳಿ.
"ಮನನ" ಲೋಕಾರ್ಪಣೆ

"ಚೈತ್ರರಶ್ಮಿ" ಲೋಕಾರ್ಪಣೆ
ಶ್ರೀ ರಾಚಂ ಅವರಿಗೆ ಸಮ್ಮಾನ ಉತ್ತರಕನ್ನಡ ಬಳಗದಿಂದ
ನಮ್ಮ ಬಳಗ

ಮುಖಪುಟಗಳು
ಕರೆ ಓಲೆ.