Tuesday, February 14, 2012

ಉಳಿವುದಿಷ್ಟೇ ಈ ಪ್ರೇಮದಂತ್ಯದಲಿ....



ನಾನು ಸೋತಾಗೆಲ್ಲ ನಿನ್ನ ಅರಸುತ್ತೇನೆ.
ಪಕ್ಕದಲ್ಲಿ ನೀನಿದ್ದರೆ ಅದೇನೋ ನೆಮ್ಮದಿ
ಹುಡುಕುವ ಹಾಗಿಲ್ಲ
ಗೊತ್ತು ಬುದ್ದಿಗೆ ಅಲ್ಲಿ ನೀನಿರುವುದಿಲ್ಲ.
ನಾ ಒಂಟಿ ಅಂದುಕೊಳ್ಳುವ ಸತ್ಯ
ಮನಸ್ಸಿಗೆ ಹಿತವಲ್ಲ.
ಅದಕ್ಕೆಂದೇ ಸತ್ಯಕ್ಕೆ ಕುರುಡಾಗಿ
ಕಣ್ಣು ಮುಚ್ಚಿಬಿಡುತ್ತೇನೆ.
ನೀನಿದ್ದಿ ಎಂಬ ಭ್ರಮೆಯಿಂದ ಬದುಕುತ್ತೇನೆ.
ಬದುಕಿಸುವುದು ಭ್ರಮೆಯಾದರೇನು?
ಎಲ್ಲಕ್ಕಿಂತ ದೊಡ್ಡದು ಬದುಕುವುದೇ ಅಲ್ಲವಾ?
ಉದ್ದೇಶ ವಿಲ್ಲದಿದ್ದರೂ ಬದುಕುವುದು
ಅನಿವಾರ್ಯ!!
ಅವತ್ತೆಲ್ಲ ಒಂಟಿತನವೇ ಬದುಕಾಗಿದ್ದಾಗ
ಬದುಕಲ್ಲಿ ಇಂತ ನಿರೀಕ್ಷೆಗಳಿಗೆ
ಜಾಗವೇ ಇರಲಿಲ್ಲ!!
ಇದೀಗ ನಿರೀಕ್ಷೆಗಳಿಗೆ ಜೀವವಿದೆ!
ನೀನಿಲ್ಲ ಎಂಬ ಸತ್ಯಕ್ಕೂ
ಜೀವವಿದೆ!
ಅದಕ್ಕೆಂದೇ ಅಳುವಿದೆ.
ಕಂಬನಿಯಿದೆ.
ಹಠವಿದೆ.
ಮತ್ತೆ  ಮಡಿಲಾಗು ಅಂತ ಕೇಳಲಾಗದ ಅಸಹಾಯಕತೆಯಿದೆ.
ಮಡಿಲಾಗಬೇಕಾದ ಮನಸುಗಳಿಗೆಲ್ಲ
ಅವರದ್ದೇ ಆದ ಬದುಕಿದೆ.
ಕನಸಿದೆ. ಸಂಭ್ರಮವಿದೆ.
ಅದರಲ್ಲಿ
ನನ್ನೀ ಅಳುವಿನ ಸಾಂತ್ವನವಿಲ್ಲ.
ನನ್ನ ಸೋತ ಸೊರಗುವಿಕೆಯ ಕಹಿ
ನಗುವಿಲ್ಲ.
ಬೇಡ... ಬದುಕು ಒಂಟಿಯೇ....
ನನಗೆ ಯಾರಿಲ್ಲ.
ಯಾರಿಲ್ಲ ನನಗೆ.
ಯಾರೂ ಬೇಡ..
ಬೇಡ ನನಗ್ಯಾರೂ...................

4 comments:

  1. ಬದುಕು ಬರಿದಾದಾಗ.. ದಾರಿಯಲ್ಲಿ ಸಿಗೋ ಕಲ್ಲು ಮುಳ್ಳಿನ ತರ. ಕಷ್ಟ ಸುಖ ಗಳ ನಡುವೆ ಸಾಗುವ ಜೀವನದ ಬಂಡಿ.. ಅರ್ತ ಪೂರ್ಣವಾಗಿ ಬಿಂಬಿಸಿದ್ದಿರಿ....

    ReplyDelete
  2. ಮತ್ತೆ ಮಡಿಲಾಗು ಅಂತ ಕೇಳಲಾಗದ ಅಸಹಾಯಕತೆಯಿದೆ... ವರೆಗೂ ಕವಿತೆ ಸೊಗಸಾಗಿ ಬ೦ದಿದೆ. ಅಲ್ಲಿವರೆಗಿನ ಸಾಲುಗಳು ಯಾವುದೊ ಒ೦ದು paricular ಸ೦ಬ೦ಧದೆಡೆಗಿನ ಸಾಲುಗಳ೦ತೆ ಭಾಸವಾಗಿ, ಆನ೦ತರದಲ್ಲಿ ಅದು generalise ಆದ೦ತಾಗಿ ಎಲ್ಲೊ ತಾಳತಪ್ಪಿದ ಹಾಗೆನಿಸಿತು. ನಿಮ್ಮ ವಿವರಣೆಯ ನಿರೀಕ್ಷೆಯಲ್ಲಿ.....

    ReplyDelete
  3. ಕವಿತೆಗಳೆಲ್ಲ ಹಾಗೇ ರಜನಿಯವರೆ, ಭಾವದೊರತೆಯ ಹರಿವಿನಲ್ಲಿ ವಾಸ್ತವ ದುತ್ತೆಂದು ಎದುರಾದಾಗ ಅದು ಜನರಲ್ ಆಗಿಬಿಡುತ್ತದೆ. ಹಾಗಾಗಿ ಕವಿತೆಗೆ ವಿವರಣೆಗಿಂತ ನಿಮ್ಮ ನಿಮ್ಮ ಭಾವಕ್ಕೆ ದಕ್ಕಿದಷ್ಟು ಎಂದು ಬಿಟ್ಟುಬಿಡುವುದು ಒಳಿತೆಂಬುದು ನನ್ನ ಭಾವ. ಸರಿ, ತಪ್ಪು, ವಿಮರ್ಶೆ ಎಲ್ಲದಕ್ಕೂ ಸ್ವಾಗತ.

    ReplyDelete