ಅಂದದ ಚಂದ್ರಮ ಚಂದದ ಹಾಲ್ನೊರೆ ಧಾರೆ ಎರೆಯುತ್ತಿದ್ದಾನೆ, ಭುವಿಯೆಂಬ ಬೆಡಗಿ ಅವನ ಶೀತಲ ಕಿರಣಗಳ ಸ್ಪರ್ಷಕೆ ನಡುಗುತ್ತಿದ್ದಾಳೆ.! ಅವನಿ ಅವಳೋ ಹಿಮಶಿಲೆ ಮುಸುಕಿನ ಇಬ್ಬನಿ ಧಾರೆಗೆ ಮೈ ನಡುಗಿಸಿ ನಿಂತ ಅಂದಗಾತಿ!
ಬೆಚ್ಚಗಿನ ಬಾಹುವಿನ ಬಳಸುವಿಕೆಗೆ ಕಾದಿರುವವಳು! ಚಂದ್ರ, ಬೇಗ ಬಳಸಿಕೋ... ಕಾಯುತ್ತಿದ್ದಾನೆ ಸೂರ್ಯ! ಉಷೆ ಮುನಿದಾಳು ! ಮತ್ತೆ ಭುವಿ ಹಿಮವೇ ಆದಾಳು! ಬೇಗ ಬಂದುಬಿಡು.. ಕತ್ತಲ ಕರಗಿಸಿ ಅವನಿಯ ರಮಿಸಿ....
ಚಂದ್ರ , ಮರೆತುಬಿಡಬೇಡ. ರಾತ್ರಿಗಳೆಂದು ನಿನ್ನವೇ..ಭುವಿಗಿದೇ ಸ್ವರ್ಗದ ಅರಮನೆ...