ಬೇಡ ಬೇಡವೆಂದರೂ ಯಾಕೀ
ನೆನಪುಗಳ ಕಾಟ!
ನನ್ನದೇ ಅನುಭೂತಿಗಳು
ನನ್ನನ್ನೇ ಕಾಡುವ ಕೆಟ್ಟ ಚಟ.
ಬುದ್ದಿಗೆ ಗೊತ್ತಿದೆ
ಭಾವಕ್ಕೂ ಗೊತ್ತಿದೆ.
ಅವೆರಡರ ಕನ್ಣಮುಚ್ಚಾಲೆ!
ಸಾಯುತ್ತಿರುವುದು ನಾನಲ್ಲೆ!
ಕಣ್ಣಂಚ ಕೊನೆಯಲ್ಲಿ
ಆರುವುದಿಲ್ಲ ತಂಪು
ಕೈಬೆರಳು ಇಲ್ಲ
ಅದನೊರೆಸಲು ಗೊತ್ತು
ಆದರೂ ಯಾಕೀ ಹಟ ಕಣ್ಣಿಗೆ!
ಗೆದ್ದರೆ ಗೆದ್ದುಬಿಡುವೆ ನಿನ್ನನ್ನೇ..
ನನ್ನನ್ನೇ...
ಉಳಿಯುವುದಿಲ್ಲ ಹನಿ ನೀರು.
ಮತ್ತೆ ಅಳು ಬೇಡ ನಿನಗೆ
ನಾಳೆ ನಗುವಿಲ್ಲ.!
ಅರ್ಥ ಆಗಿ ಹೋದರೆ
ಉಳಿವುದೇನು ಬದುಕಲಿ?
ಅದಕ್ಕೆಂದೇ ಅರ್ಥವಾಗದಿರು
ಅತ್ತರೂ ಕಾರಣ ಹೇಳದಿರು,
ಕತ್ತಲಲಿ ಕಣ್ಮುಚ್ಚಿ ಕುಳಿತು
ಚಿತ್ತದೆಲ್ಲವ ಮರೆ.
ಮರೆತ ದಿನ ನನಗೂ ಹೇಳು.
ನಾನೂ ಪ್ರಯತ್ನಿಸುವೆ.
ಸಾಕು ಈ ಬದುಕಿನಾಟ
ಒಂದಷ್ಟು ಶಾಂತವಾಗು.
ಚಿರನಿದ್ರೆ ಸಿಗುವವರೆಗೆ
ಪ್ರಶಾಂತಿ ನೆಲೆ ನಿಲ್ಲಲಿ.
ನಮಸ್ತೆ ಮನಸೇ,
ReplyDeleteಮೊದಲ ಬಾರಿ ನಿಮ್ಮ ಮನೆಗೆ ಭೇಟಿಯಿತ್ತೆ....ಮನಸ್ಸು ತಣಿಯಿತು.
ಸುಂದರ ಚಿತ್ರ...ಸುಂದರ ಸಾಲುಗಳು ಮಾನಸ ಸರೋವರದ ಬಗ್ಗೆ ....ಮನಸ್ಸು ಒಂಥರಾ ಪ್ರಶಾಂತವಾದ ಭಾವ ಆ ಚಿತ್ರ ನೋಡುತ್ತಿದ್ದರೆ..ಅಪ್ಪಣೆ ಪಡೆಯದೇ ಕಾಪಿ ಮಾಡಿಕೊಂಡಿದ್ದೇನೆ ಕ್ಷಮೆಯಿರಲಿ...
ಹಾಗೇನೆ ಪದ್ಯ ಅರ್ಥಪೂರ್ಣವಾಗಿದೆ....
ಅರ್ಥ ಆಗಿ ಹೋದರೆ
ಉಳಿವುದೇನು ಬದುಕಲಿ?
ಅದಕ್ಕೆಂದೇ ಅರ್ಥವಾಗದಿರು
ಅತ್ತರೂ ಕಾರಣ ಹೇಳದಿರು,
ಕತ್ತಲಲಿ ಕಣ್ಮುಚ್ಚಿ ಕುಳಿತು
ಚಿತ್ತದೆಲ್ಲವ ಮರೆ.
ಮರೆತ ದಿನ ನನಗೂ ಹೇಳು.
ನಾನೂ ಪ್ರಯತ್ನಿಸುವೆ.
ಈ ಸಾಲುಗಳು ಮನ ಮುಟ್ಟಿದವು.
ವಂದನೆಗಳು.
ಸುನಿಲ್
ಧನ್ಯವಾದಗಳು ಸುನಿಲ್..
ReplyDelete