ನಾನೊಂದು ಪುಟ್ಟ ಚಿಗುರು,
ಮೊಗ್ಗು, ಅರಳಿ ನಿಂತ ಹೂ.
ನೀನೋ ಆಕಾಶದಲ್ಲಿ
ಸ್ವಪ್ರಭೆಯ ಬೀರುತಿರೋ ಭಾನು....
ನಿನ್ನ ಕಿರಣಗಳ ಸ್ಪರ್ಶ
ಸಾಕು ನನ್ನ ಜೀವಂತಿಕೆಗೆ
ನಿನ್ನ ಪ್ರೇಮದೊಂದು ನೋಟ
ನನ್ನ ಎದೆಯ ಪಲ್ಲವಕ್ಕೆ.
ಎದೆ ತುಂಬ ನೂರು ಮಾತು
ಏನ ಹೇಳಲಿ?
ಏನ ಬರೆಯಲಿ ಗೆಳೆಯಾ
ಯಾವುದು ಮೊದಲು ಮತ್ತು
ಯಾವುದು ಕೊನೆ?
ಎಲ್ಲೆಲ್ಲೋ ಸುಳಿದು ಮತ್ತೆ
ನನ್ನೊಳಗೆ ಹರಿವ ತೊರೆ
ಅದ್ಯಾವ ನೀರು!
ನನಗೂ ನಿನಗೂ ಗೊತ್ತು
ಅದರ ಹೆಸರು!
ಗೆಳೆಯನ ವಿಮರ್ಶಣೆ,ಭಾವನೆ ಎರಡೂ ಚೆನ್ನಾಗಿದೆ ..ಚಂದದ ಕವನಕ್ಕೆ ಅಭಿನಂದನೆಗಳು ... ಹೀಗೆ ಬರೀತಾ ಇರಿ :)
ReplyDeleteಧನ್ಯವಾದಗಳು.. ರಂಜಿತಾ ಅವರೇ.....
ReplyDelete